ಬ್ರಸೆಲ್ಸ್: ಬೆಲ್ಜಿಯಂನ ಒಂಬತ್ತು ವರ್ಷದ ಬಾಲಕ ಈ ತಿಂಗಳ ಅಂತ್ಯದ ವೇಳೆಗೆ ವಿಶ್ವದ ಕಿರಿಯ ಪದವೀಧರ ಆಗಲಿದ್ದ. ಆದರೆ ಈಗ ವಿಶ್ವವಿದ್ಯಾಲಯವನ್ನು ತೊರೆದು ಹೊರ ಬಂದಿದ್ದಾನೆ. ಬೆಲ್ಜಿಯಂನ ಒಂಬತ್ತು ವರ್ಷದ ಲಾರೆಂಟ್ ಸೈಮನ್ಸ್ ಒಂದು ವರ್ಷದಲ್ಲಿ ಪ್ರೌಢಶಾಲೆ ಶಿಕ್ಷಣ ಮುಗಿಸಿದ್ದ. ಬಳಿಕ 2018ರಲ್ಲಿ ನೆದರ್ಲೆಂಡ್‍ನ ಐಂಡ್‍ಹೋವನ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದಲು ಸೇರಿ ವಿಶ್ವದ ಗಮನ ಸೆಳೆದಿದ್ದ. ಅಮೆರಿಕದ ಮೈಕೆಲ್ ಕೀರ್ನಿ ಪ್ರಸ್ತುತ ವಿಶ್ವದ ಅತ್ಯಂತ ಕಿರಿಯ ಪದವೀಧರರಾಗಿದ್ದು, ಅವರು 1994ರಲ್ಲಿ ತಮ್ಮ 10 ವರ್ಷ […]
↧