ದುಬೈನಲ್ಲಿ ಶುಕ್ರವಾರ ಸಂಜೆ ಭಾರೀ ಮಳೆ ಸುರಿದಿತ್ತು. ಈ ಮಳೆ ವಾರಾಂತ್ಯದವರೆಗೂ ಮುಂದುವರಿದಿತ್ತು. ಹೇಳಿ ಕೇಳಿ ದುಬೈ ಉತ್ತಮ ಶಾಪಿಂಗ್ ಮಾಲ್, ಅದ್ಭುತ ಕಟ್ಟಡಗಳಿಗೆ ಹೆಸರುವಾಸಿ. ಆದರೆ, ಮೊನ್ನೆ ಮಳೆ ಜೊತೆಗೆ ಮಿಂಚು ಕೂಡಾ ಕಾಣಿಸಿಕೊಳ್ಳಲು ಶುರುವಾಗುತ್ತಿದ್ದಂತೆಯೇ ಎಲ್ಲರೂ ತಮ್ಮ ತಮ್ಮ ಗೂಡು ಸೇರುತ್ತಿದ್ದರು. ಇದೇ ವೇಳೆ, ವಿಶ್ವದ ಅತೀ ಎತ್ತರದ ಮತ್ತು ಅಷ್ಟೇ ಸುಂದರವಾದ ಬುರ್ಜ್ ಖಲೀಫಾದ ತುದಿಗೂ ಮಿಂಚು ಹೊಡೆದಿತ್ತು. ಇದು ಈಗ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಿಂಚಿನ ಬಳ್ಳಿಯನ್ನು ಸುಂದರವಾಗಿ ಸೆರೆ ಹಿಡಿಯುವುದು ಸುಲಭವೇನಲ್ಲ. […]
↧