ನವದೆಹಲಿ: ಭಾರತ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಕಾಶ್ಮೀರದಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಐರೋಪ್ಯ ಜನಪ್ರತಿನಿಧಿಗಳ ವಿವಿಧ ಗುಂಪುಗಳು ಬರೋಬ್ಬರಿ 6 ನಿರ್ಣಯಗಳನ್ನು ಹೊರಡಿಸಿವೆ. ಈ ಮೂಲಕ ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೇರಲಾಗಿದೆ. ಮಾರ್ಚ್ ತಿಂಗಳಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟದ ಮಧ್ಯೆ ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿರುವುದು ಕೂತೂಹಲ ಮೂಡಿಸಿದೆ. ಯೂರೋಪಿಯನ್ ಯೂನಿಯನ್ ಪಾರ್ಲಿಮೆಂಟ್ನಲ್ಲಿರುವ 751 ಸದಸ್ಯರ ಪೈಕಿ ವಿವಿಧ ಗುಂಪುಗಳಿಗೆ ಸೇರಿದ 600ಕ್ಕೂ ಹೆಚ್ಚು ಸಂಸದರು […]
↧