ಹೊಸದಿಲ್ಲಿ: ಲಿಬಿಯಾದ ಸಿರ್ತೆ ನಗರದಲ್ಲಿ ಐಸಿಸ್ ಉಗ್ರರು ಅಪಹರಿಸದ ನಾಲ್ವರು ಭಾರತೀಯರಲ್ಲಿ ಕನ್ನಡಿಗರಾದ ಲಕ್ಷ್ಮಿಕಾಂತ್ ಮತ್ತು ವಿಜಯ್ ಕುಮಾರ್ ಅವರನ್ನು ಬಿಡುಗಡೆಗೊಳಿಸಲಾಗಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ವೈಯಕ್ತಿಕ ಟ್ವೀಟ್‌ನಲ್ಲಿ ಈ ವಿಷಯ ತಿಳಿಸಿದ್ದು, ‘ಉಳಿದ ಇಬ್ಬರನ್ನು ಬಿಡಿಸಲು ಪ್ರಯತ್ನಿಸಲಾಗುತ್ತಿದೆ,’ ಎಂದಿದ್ದಾರೆ. ಅಪಹರಣದ ಹಿನ್ನೆಲೆ: ಗುರುವಾರ ಸಂಜೆ ನಾಲ್ವರು ಭಾರತೀಯರನ್ನು ಐಸಿಸ್ ಉಗ್ರರು ಅಪಹರಿಸಿದ್ದರು. ಅವರಲ್ಲಿ ಮೂವರು ಸಿರ್ತೆ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದು, ಒಬ್ಬರು ವಿವಿ ಸಿಬ್ಬಂದಿ. ನಾಲ್ವರಲ್ಲಿ ಕರ್ನಾಟಕದ ಇಬ್ಬರನ್ನು ಬಿಡುಗಡೆಗೊಳಿಸಲಾಗಿದ್ದು, ಹೈದರಾಬಾದ್ ಮೂಲದ ಇನ್ನಿಬ್ಬರ […]
↧