ಕೌಲಾಲಂಪುರ: ಹಿಂದೂ ಮಹಾಸಾಗರದ ರಿಯೂನಿಯನ್ ದ್ವೀಪದಲ್ಲಿ ಪತ್ತೆಯಾಗಿದ್ದ ವಿಮಾನದ ಭಗ್ನಾವಶೇಷವು ಕಳೆದ ವರ್ಷ ಮಾರ್ಚ್ನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಎಂಎಚ್ 370 ಬೋಯಿಂಗ್ 777 ವಿಮಾನದ್ದೇ ಎಂದು ಖಚಿತವಾಗಿದೆ. ಹಿಂದೂ ಮಹಾಸಾಗರದಲ್ಲಿ ಈಗಾಗಲೇ ಸಿಕ್ಕಿರುವ ವಿಮಾನದ ರೆಕ್ಕೆಯ ಅವಶೇಷವು ಆರು ಅಡಿ ಉದ್ದವಿದೆ. ಅದರ ಮೇಲೆ 657 ಬಿಬಿ ಎಂಬ ಬಿಡಿಭಾಗ ಗುರುತನ್ನು ನಮೂದಿಸಲಾಗಿದೆ. ಅವಶೇಷದ ಬಿಡಿಭಾಗದ ಮೇಲಿದ್ದ ಸಂಖ್ಯೆಯು ಅದು 370 ಬೋಯಿಂಗ್ 777 ವಿಮಾನದ್ದೇ ಎನ್ನುವುದನ್ನು ಖಚಿತಪಡಿಸಿದೆ. ಈ ಬೆಳವಣಿಗೆಯಿಂದ ಆ ವಿಮಾನ ದುರಂತದ ರಹಸ್ಯ […]
↧