ಚೀನಾ: ಕೊರೊನಾ ವೈರಸ್ ಪರಿಣಾಮ ಚೀನಾದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸ್ಥಳೀಯ ಮಾಧ್ಯಮ ಮನಕಲಕುವ ವಿಡಿಯೋ ಒಂದನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದೆ. ಈ ವಿಡಿಯೋದಲ್ಲಿ ಕೊರೋನಾ ವೈರಸ್ ನ ದಾರುಣತೆಯ ಸ್ಪಷ್ಟ ಅರಿವಾಗುತ್ತದೆ. ವಿಡಿಯೋದಲ್ಲಿ ಕೊರೋನಾ ವೈರಸ್ ಪೀಡಿತರ ಶುಶ್ರೂಷೆ ಮಾಡುತ್ತಿದ್ದ ನರ್ಸ್ ಒಬ್ಬರು ತಮ್ಮ ಮಗಳಿಗೆ ದೂರದಲ್ಲೇ ನಿಂತು ಅಪ್ಪುಗೆ ಮಾಡುವ ದೃಶ್ಯ ಮನಕಲಕುವಂತಿದೆ. ಚೀನಾದ ವುಹಾನ್ ನಲ್ಲಿ ಕೊರೋನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರಿಸಿದ್ದು, ಬಲಿಯಾದವರ ಸಂಖ್ಯೆ 800ರ ಗಡಿ ದಾಟಿದೆ. […]
↧