ಲಂಡನ್: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ 5 ವರ್ಷಗಳ ಹಿಂದಿನ ಮಟ್ಟಕ್ಕೆ ಶುಕ್ರವಾರ ಕುಸಿದಿದೆ. ಮಾತ್ರವಲ್ಲದೆ ಕಳೆದೊಂದು ದಶಕದಲ್ಲಿ ಅತಿ ಹೆಚ್ಚು ನಷ್ಟ ದಾಖಲಿಸಿದ ವಾರವಾಗುವ ಸಾಧ್ಯತೆಯೂ ಇದೆ. ಅಮೆರಿಕದ ಅರ್ಥವ್ಯವಸ್ಥೆ ಚೇತರಿಸುತ್ತಿರುವುದು ಮತ್ತು ಅಲ್ಲಿ ಬಡ್ಡಿ ದರ ಹೆಚ್ಚುವ ನಿರೀಖ್ಷೆ ದಟ್ಟವಾಗಿರುವುದು ಹಳದಿ ಲೋಹದ ಬೆಲೆ ಕುಸಿತಕ್ಕೆ ಕಾರನವಾಗಿದೆ. ಚಿನ್ನದ ದರ ಪ್ರತಿ ಔನ್ಸಿಗೆ 1,081 ಡಾಲರ್‌ಗೆ ತಗ್ಗಿದೆ. ಬೆಳ್ಳಿ ಕೂಡ ಪ್ರತಿ ಔನ್ಸಿಗೆ 14.57 ಡಾಲರ್‌ಗೆ ಇಳಿಕೆಯಾಗಿದೆ.
↧