ರೋಮ್: ವಿಶ್ವವ್ಯಾಪಿ ಮಹಾಮಾರಿಯಂತೆ ಹಬ್ಬುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಉತ್ತರ ಇಟಲಿಯ 10ಕ್ಕೂ ಹೆಚ್ಚು ನಗರಗಳು ಅಕ್ಷರಶಃ ಸ್ಥಬ್ಧಗೊಂಡಿವೆ. ಕೊರೊನಾ ವೈರಸ್ಗೆ ಇಟಲಿಯಲ್ಲಿ ಮೊದಲ ಬಲಿಯಾಗಿರುವುದು ವರದಿಯಾಗುತ್ತಿದ್ದಂತೆಯೇ ರಾಷ್ಟ್ರಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇಟಲಿಯ ಲೊಂಬಾರ್ಡಿ ಮತ್ತು ವೆನೆಟೋ ನಗರಗಳಲ್ಲಿ ಹೋಟೆಲ್ಗಳು, ಅಂಗಡಿ ಮಳಿಗೆಗಳು ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜತಗೆ ಕ್ರೀಡಾಕೂಟಗಳನ್ನೂ ಸಹ ರದ್ದುಗೊಳಿಸಲಾಗಿದೆ. ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲೋದಿ, ಮಿಲಾನ್ ನಗರದ ಸುತ್ತಲಿನ ಸುಮಾರು 10 ಪಟ್ಟಣಗಳನ್ನು ಸ್ತಬ್ಧಗೊಳಿಸುವಂತೆ ಅಲ್ಲಿನ ಆರೊಗ್ಯ ಸಚಿವರು ಆಜ್ಞೆ […]
↧