ಪುರಾತನ ಕಾಲದ ಹಕ್ಕಿಯ ದೇಹವೊಂದು ಸೈಬೀರಿಯಾದಲ್ಲಿ ಪತ್ತೆಯಾಗಿದೆ. ಈ ಹಕ್ಕಿಯ ಕಾಲಮಾನ ಒಂದೆರಡು ಸಾವಿರ ವರ್ಷ ಅಲ್ಲ, ಬರೋಬ್ಬರಿ 46,000 ವರ್ಷ…! ಈಶಾನ್ಯ ಸೈಬೀರಿಯಾದ ಬೆಲಾಯ ಗೋರಾ ಗ್ರಾಮದಲ್ಲಿ ಹಿಮದೊಳಗಿದ್ದ ಈ ಹಕ್ಕಿಯ ದೇಹ 2018ರಲ್ಲಿ ಪತ್ತೆಯಾಗಿತ್ತು. ಈ ಹಕ್ಕಿ ದೇಹವನ್ನು ಕಂಡ ಬೇಟೆಗಾರರು ಇದನ್ನು ತಜ್ಞರಿಗೆ ಒಪ್ಪಿಸಿದ್ದರು. ಇದಾದ ಬಳಿಕ ಸ್ಟಾಕ್ಹೋಮ್ ವಿಶ್ವವಿದ್ಯಾಲಯ ಮತ್ತು ಸ್ವೀಡಿಷ್ ನ್ಯಾಚುರಲ್ ಹಿಸ್ಟರಿ ಸಂಶೋಧಕರು ಈ ಹಕ್ಕಿಯ ಬಗೆಗಿನ ಅಧ್ಯಯನ ಆರಂಭಿಸಿದ್ದರು. ರೇಡಿಯೋ ಕಾರ್ಬನ್ ಡೇಟಿಂಗ್‌ನಲ್ಲಿ ಈ ಹಕ್ಕಿಯ ಕಾಲಮಾನ […]
↧