ಜೆರುಸಲೇಮ್: ಇಸ್ರೇಲ್‌ನ ಟೆಲ್‌ಅವಿವ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಪೂರ್ವ ಸಂಶೋಧನೆಯೊಂದನ್ನು ಮಾಡಿದ್ದಾರೆ. ಇದುವರೆಗೆ ಪ್ರಾಣಿಗಳು ಜೀವಂತವಾಗಿರಲು ಆಮ್ಲಜನಕವನ್ನು ಉಸಿರಾಡುವುದು ಅನಿವಾರ್ಯ ಎಂಬ ಸಿದ್ಧಾಂತ ಚಾಲ್ತಿಯಲ್ಲಿದೆ. ಈಗ ಆ ನಂಬಿಕೆಯನ್ನೇ ತಲೆಕೆಳಗು ಮಾಡುವಂತೆ, ಮೀನಿನ ಜಾತಿಗೆ ಸೇರಿದ ಅತಿಸಣ್ಣ, ಬರೀ 10 ಜೀವಕೋಶಗಳುಳ್ಳ ಪರಾಶ್ರಿತ ಜೀವಿಯೊಂದು ಆಮ್ಲಜನಕ ಉಸಿರಾಡದೇ ಬದುಕುತ್ತದೆ ಎಂದು ಗೊತ್ತಾಗಿದೆ. ವಿವಿ ಪ್ರೊಫೆಸರ್ ಡೊರೊಥಿ ಹಚನ್ ಇದನ್ನು ಬಹಿರಂಗಪಡಿಸಿದ್ದಾರೆ. ಇದೊಂದು ಪರಾಶ್ರಿತ ಜೀವಿ. ಇದನ್ನು ಹೆನ್ನೆಗುಯ ಸಲ್ಮನಿಕೊಲ ಎಂದು ಹೆಸರಿಸಲಾಗಿದೆ. ಜೆಲ್ಲಿಫಿಶ್ (ಅತಿಸಣ್ಣ ಜಾತಿಯ ಮೀನು) ಅಥವಾ […]
↧