ಫ್ರಾಂಕ್ಫರ್ಟ್: ಜಗತ್ತಿನಾದ್ಯಂತ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಕೊರೊನಾ ಹೊಡೆತಕ್ಕೆ ಎಲ್ಲ ಕ್ಷೇತ್ರಗಳು ಮಕಾಡೆ ಮಲಗಿದ್ದು, ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಈಗ ಈ ಆರ್ಥಿಕ ಕುಸಿತವೇ ಒಂದು ರಾಜ್ಯದ ಹಣಕಾಸು ಮಂತ್ರಿಯನ್ನು ಬಲಿ ಪಡೆದಿದೆ. ಹೌದು, ಕೊರೊನಾದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಯಲ್ಲಿದ್ದ ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಮಂತ್ರಿ ಥಾಮಸ್ ಸ್ಕೇಪರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಹೆಸ್ಸೆ ರಾಜ್ಯದ ಪ್ರಧಾನಿ ವೋಲ್ಕರ್ ಬೌಫಿಯರ್ ಭಾನುವಾರ ಖಚಿತಪಡಿಸಿದ್ದಾರೆ. 54 ವರ್ಷ […]
↧