ನವದೆಹಲಿ: ಲಿಬಿಯಾದಲ್ಲಿ ಐಸಿಸ್ ಉಗ್ರ ಸೆರೆಯಲ್ಲಿರುವ ಆಂಧ್ರಪ್ರದೇಶದ ಶ್ರೀಕಾಕುಳಂನ ಗೋಪಿಕೃಷ್ಣ, ಹೈದರಾಬಾದಿನ ಬಲರಾಮ್ ಸುರಕ್ಷಿತವಾಗಿದ್ದಾರೆಂದು ಮಾಹಿತಿ ಲಭಿಸಿದೆ ಬಲರಾಮ್ ತಾವು ಸುರಕ್ಷಿತವಾಗಿದ್ದೇವೆ ಎಂದು ಪತ್ನಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲಿಯೇ ಅವರಿಬ್ಬರ ಬಿಡುಗಡೆಯಾಗುವ ನಿರೀಕ್ಷೆ ಇದ್ದು ಕೇಂದ್ರ ಸರ್ಕಾರ ಈ ದಿಶೆಯಲ್ಲಿ ಸಕಲ ಪ್ರಯತ್ನಗಳನ್ನು ಮುಂದುವರೆಸಿದೆ. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದ ನಾಲ್ವರು ಭಾರತೀಯರನ್ನು ನಿನ್ನೆ ಲಿಬಿಯಾದ ಟ್ರೈಪೋಲೀಯ ಸಿರ್ತೆ ನಗರದಿಂದ ಇಸಿಸ್ ಭಯೋತ್ಪಾದಕರು ಅಪಹರಿಸಿದ್ದರು. ಅವರಲ್ಲಿ ಇಬ್ಬರು ಕನ್ನಡಿಗರನ್ನು ಬಿಡುಗಡೆ ಮಾಡಿದ್ದ ಉಗ್ರರು ಆಂಧ್ರ ಮತ್ತು ತೆಲಂಗಾಣದ […]
↧