ನ್ಯೂಯಾರ್ಕ್: ತೀವ್ರ ಗಂಭೀರ ಸ್ಥಿತಿ ತಲುಪಿರುವ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಮಲೇರಿಯಾ ನಿರೋಧಕ ಔಷಧದಿಂದ ಹೃದಯಕ್ಕೆ ತೊಂದರೆಯಾಗುವ ಅಪಾಯವಿದೆ ಎಂದು ಅಮೆರಿಕದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ‘‘ಮಲೇರಿಯಾ ನಿರೋಧಕ ಔಷಧವಾದ ಹೈಡ್ರಾಕ್ಸಿಕ್ಲೊರೊಕ್ವಿನ್ ಮತ್ತು ರೋಗನಿರೋಧಕವಾದ ಅಜಿತ್ರೋಮೈಸಿನ್ ಅನ್ನು ಗಂಭೀರ ಸ್ಥಿತಿ ರೋಗಿಗಳಿಗೆ ನೀಡಲಾಗುತ್ತಿದೆ. ಈ ಸಂಯೋಜನೆಯಿಂದ ಹೃದಯ ಬಡಿತದಲ್ಲಿ ಏರಿಳಿತ ಉಂಟಾಗುವ ಸಾಧ್ಯತೆ ಇದೆ. ಸಾಧಾರಣ ಬಡಿತದ ಲಯ ಕಳೆದುಕೊಂಡು ಹೃದಯವು ಸಮಸ್ಯೆಗೀಡಾಗುವ ಅಪಾಯವಿದೆ,’’ ಎಂಬುದಾಗಿ ಇಂಡಿಯಾನಾ ವಿಶ್ವವಿದ್ಯಾಲಯ ಮತ್ತು ಒರಿಗನ್ […]
↧