ನ್ಯೂಯಾರ್ಕ್: ಹಾಂಕಾಂಗ್ನಲ್ಲಿ ಎರಡು ನಾಯಿಗಳಿಗೆ ಕೊರೋನಾ ಸೋಂಕು ತಗುಲಿದ್ದು ಸುದ್ದಿಯಾದ ಬೆನ್ನಿಗೆ ಇದೀಗ ಅಮೆರಿಕದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ ಹುಲಿಗಳಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ. ನ್ಯೂಯಾರ್ಕ್ನ ಬ್ರಾಂಕ್ಸ್ ಮೃಗಾಲಯ ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಇಲ್ಲಿನ ಹುಲಿಯೊಂದನ್ನು ಪರೀಕ್ಷಿಸಲಾಗಿದ್ದು, ಅದರ ದೇಹದಲ್ಲಿ COVID-19 ಸೋಂಕು ಇರುವುದು ಪತ್ತೆಯಾಗಿದೆ. ಮೃಗಾಲಯದಲ್ಲಿ ಹುಲಿಗಳ ಉಸ್ತುವಾರಿ ಹೊಂದಿದ್ದ ಪಾಲಕನಿಂದ ಈ ಸೋಂಕು ಹುಲಿಗೆ ತಗುಲಿರುವ ಸಾಧ್ಯತೆ ಇದೆ” ಎಂದು ಸ್ಪಷ್ಟೀಕರಣ ನೀಡಿದೆ. ಇದಲ್ಲದೆ, ನಾಡಿಯ […]
↧