ಎಲ್ಲ ಇದ್ದು ಸರಿಯಾಗಿ ನಿದ್ದೆ ಬರುವುದಿಲ್ಲ ಎಂದರೆ ಅದು ಬರೀ ಕೊರತೆ ಅಲ್ಲ, ದೊಡ್ಡ ಕೊರತೆ. ಇದು ಹಾಗೆಯೇ ಮುಂದುವರಿದರೆ ಕಾಯಿಲೆಯಾಗುತ್ತದೆ. ಈ ಕಾಯಿಲೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲಾಗದಂಥದ್ದು. ದಿನವಿಡಿ ದುಡಿದು ಬಂದು ರಾತ್ರಿ ಊಟದ ನಂತರ ಸುಖವಾದ ನಿದ್ದೆ ಮಾಡಿದರೆ, ಮಾರನೆಯ ದಿನ ಮತ್ತೆ ಉತ್ಸಾಹದಿಂದ ಕೆಲಸಕ್ಕೆ ಹೋಗಲು ಅಗತ್ಯವಿರುವ `ಟಾನಿಕ್’. ವಾರದಲ್ಲಿ ಪ್ರತಿದಿನ 30 ನಿಮಿಷ ನಿದ್ದೆಗೆಡುವುದರಿಂದ ಸ್ಥೂಲಕಾಯ ಮತ್ತು ಟೈಪ್-2 ಮಧುಮೇಹದ ಅಪಾಯವಿದೆಯಂತೆ. ಇದು ತಜ್ಞರ ಅಭಿಪ್ರಾಯ ಪ್ರತಿದಿನ ಅರ್ಧಗಂಟೆಯಂತೆ ವಾರವಿಡಿ […]
↧