ವಾಶಿಂಗ್ಟನ್,ಅ.19: ಭಾರತದಲ್ಲಿ ಹೆಚ್ಚುತ್ತಿರುವ ‘ಅಸಹಿಷ್ಣುತೆ’ಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಸಾಹಿತಿಗಳಿಗೆ ಜಾಗತಿಕ ಬರಹಗಾರರ ಸಂಘ (ಪೆನ್) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಹಾಗೂ ಸಂವಿಧಾನವು ಖಾತರಿಪಡಿಸಿರುವ ವಾಕ್ಸ್ವಾತಂತ್ರದ ಹಕ್ಕನ್ನು ಕಾಪಾಡುವಂತೆ ಅದು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ದಾದ್ರಿ ಘಟನೆ, ಕಲಬುರ್ಗಿ ಹತ್ಯೆ ಸೇರಿದಂತೆ ದೇಶದಲ್ಲಿ ‘ಅಸಹಿಷ್ಣುತೆ’ಯ ವಿರುದ್ಧ ಪ್ರತಿಭಟನೆಯಾಗಿ ತಮ್ಮ ಪ್ರತಿಷ್ಠಿತ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಬರಹಗಾರರು ಹಾಗೂ ಕಲಾವಿದರಿಗೂ ಕೆನಡಾದ ಕ್ಯುಬೆಕ್ ನಗರದಲ್ಲಿ ನಡೆದ 81ನೆ ಪೆನ್ ಅಂತಾರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನವು […]
↧