ಬೀಜಿಂಗ್: ಚೈನಾದ ಕಿಂಡರ್ಗಾರ್ಟನ್ ಅಧ್ಯಾಪಕಿಯೊಬ್ಬರು 20 ಕ್ಕೂ ಹೆಚ್ಚು ಮಕ್ಕಳ (ಬಾಲಕರು) ನಗ್ನ ಫೋಟೋ ತೆಗೆದು ಸಾಮಾಜಿಕ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿ, ಅದು ಲೈಂಗಿಕ ಶಿಕ್ಷಣದ ಭಾಗ ಎಂದು ಸಮಜಾಯಿಶಿ ನೀಡಿರುವುದು ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ. ಚೈನಾದ ಹೆನನ್ ಪ್ರಾಂತ್ಯದಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮ ಎಂಬ ಅಧ್ಯಾಪಕಿ ಜುಲೈನಲ್ಲಿ ಮಕ್ಕಳ ನಗ್ನ ಚಿತ್ರ ಕ್ಲಿಕ್ಕಿಸಿ ಸಾಮಾಜಿಕ ಅಂತರ್ಜಾಲದಲ್ಲಿ ಹಾಕಿದ್ದಾಳೆ. ನಂತರ ಇದು ಒಳ್ಳೆಯ ಕಾರಣಕ್ಕೆ ಮಾಡಿರುವುದಾಗಿ ಕಾರಣ ನೀಡಿದ್ದಾಳೆ ಎಂದು ಚೈನನ್ಯೂಸ್.ಕಾಂ ವರದಿ ಮಾಡಿದೆ. […]
↧