ವಾಷಿಂಗ್ ಟನ್: ಬಾಲ್ಯದಲ್ಲಿ ಆತ್ಮೀಯ ಸ್ನೇಹವನ್ನು ಹೊಂದುವುದರಿಂದ ಪ್ರೌಢಾವಸ್ಥೆಯ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದೆಂಬ ಅಂಶವನ್ನು ಹೊಸ ಸಶೋಧನೆಯೊಂದು ಬಹಿರಂಗಪಡಿಸಿದೆ. ವರ್ಜೀನಿಯಾದ ವಿಶ್ವವಿದ್ಯಾನಿಲಯದಲ್ಲಿ 13 – 27 ವಯೋಮಿತಿಯವರನ್ನು ಅಧ್ಯಯನಕ್ಕೆ ಒಳಪಡಿಸಿದ್ದು, ಬಾಲ್ಯದಲ್ಲಿ ಆತ್ಮೀಯ ಸ್ನೇಹವನ್ನು ಹೊಂದುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ. ಆತ್ಮೀಯ ಸ್ನೇಹ ಆತಂಕ ಮತ್ತು ಖಿನ್ನತೆ ಕಡಿಮೆಯಾಗುವುದರಿಂದ ಪ್ರೌಢಾವಸ್ಥೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಒಂಟಿಯಾಗಿರುವುದು ಆಧುನಿಕ ಪಾಶ್ಚಿಮಾತ್ಯ ಸಮಾಜದಲ್ಲಿ ಸಾಮಾನ್ಯವಾಗುತ್ತಿದೆ. ಆದರೆ ಮಾನವೀಯ ಸಂಬಂಧಗಳನ್ನು ಕಳೆದುಕೊಳ್ಳುವುದು ಭಾರಿ ಅಪಾಯವನ್ನು […]
↧