ಲಂಡನ್, ನ.12: ಭಾರತ-ಬ್ರಿಟನ್ ನಡುವಿನ ಆರ್ಥಿಕ ಸಂಬಂಧಗಳನ್ನು ಹೆಚ್ಚಿಸುವ ಉದ್ದೇಶದೊಡನೆ ಬಿಡುವಿಲ್ಲದ ಕಾರ್ಯಸೂಚಿಯೊಂದಿಗೆ ಬ್ರಿಟನ್ಗೆ ತನ್ನ ಮೂರು ದಿನಗಳ ಪ್ರವಾಸವನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಲಂಡನ್ನಿಗೆ ಆಗಮಿಸಿದರು. ಸಂಜೆ ಬಕಿಂಗ್ಹ್ಯಾಮ್ಶೈರ್ನಲ್ಲಿ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹಾಗೂ ಮೋದಿ ನೇತೃತ್ವದಲ್ಲಿ ಉಭಯದೇಶಗಳ ನಿಯೋಗಗಳು ಜಂಟಿ ಮಾತುಕತೆಯನ್ನು ನಡೆಸಿದವು. ಈ ಸಂದರ್ಭದಲ್ಲಿ ಭಾರತ-ಬ್ರಿಟನ್ ಮಹತ್ವದ ನಾಗರಿಕ ಅಣುಒಪ್ಪಂದಕ್ಕೆ ಸಹಿಹಾಕಿದವು. ಮೂರು ದಿನಗಳ ಬ್ರಿಟನ್ ಪ್ರವಾಸಕ್ಕಾಗಿ ಇಂದು ಏರ್ಇಂಡಿಯಾದ ವಿಶೇಷ ವಿಮಾನದಲ್ಲಿ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಬಂದಿಳಿದ […]
↧