ಜಗತ್ತಿನ ಅತೀ ಎತ್ತರದ ರೈಲ್ವೇ ಸೇತುವೆ ಭಾರತದಲ್ಲಿ ನಿರ್ಮಾಣಗೊಳ್ಳುತ್ತಿದೆ. ಜಮ್ಮು-ಕಾಶ್ಮೀರದ ಉತ್ತರ ಭಾಗದಲ್ಲಿರುವ ಚೆನಾಬ್ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ಈ ರೈಲ್ವೇ ಸೇತುವೆಯ ಕಾಮಗಾರಿ 2016ಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ. ನಿರ್ಮಾಣ ಪೂರ್ಣಗೊಳ್ಳುವ ವೇಳೆಗೆ 359 ಮೀಟರ್ ಎತ್ತರವಿರಲಿದೆ ಎನ್ನಲಾಗಿದೆ. ಚೀನಾದಕ್ಕಿಂತಲೂ ಎತ್ತರದ್ದು… ಈಗ ಇರುವ ಅತೀ ಎತ್ತರದ ರೈಲ್ವೇ ಬ್ರಿಡ್ಜ್ ಎಂದರೆ ಚೀನಾದ ಬೈಪಾಂಜಿಯಾಂಗ್ ನದಿಗೆ ಕಟ್ಟಲಾದ ರೈಲ್ವೇಸೇತುವೆ. ಇದು 275 ಮೀಟರ್’ನಷ್ಟು ಎತ್ತರವಾಗಿದೆ. ಇದಕ್ಕಿಂತಲೂ ಸುಮಾರು 84 ಅಡಿಗಳಷ್ಟು ಎತ್ತರವಾಗಲಿದೆ ಭಾರತದ ಹೊಸ ರೈಲ್ವೇ ಸೇತುವೆ. […]
↧