– ಸಿಂಧು ವಿದ್ಯಾರ್ಥಿಗಳ ಅನೇಕ ತೊಂದರೆಗಳಿಗೆ ಅನೇಕ ಬಾರಿ ಪೋಷಕರೂ ಸಹ ಕಾರಣರಾಗಿರುತ್ತಾರೆ. ಅತಿಯಾದ ಒತ್ತಡ ಹೇರುವುದು, ಕೇಳಿದ್ದನ್ನೆಲ್ಲ ಕೊಡಿಸಿಬಿಡುವುದು, ಸಾಕಷ್ಟು ಹಣ ಖರ್ಚು ಮಾಡುವುದರಿಂದ ತಾವು ತಮ್ಮ ಮಕ್ಕಳಿಗೆ ಸಾಕಷ್ಟು ಪ್ರೋತ್ಸಾಹ ಕೊಡುತ್ತಿದ್ದೇವೆಂದೂ ಭ್ರಮೆ ಬೆಳೆಸಿಕೊಂಡು ಬಿಟ್ಟಿರುತ್ತಾರೆ. ಇದೊಂದು ಮಕ್ಕಳನ್ನು ಮತ್ತೊಂದು ಒಳಸುಳಿಗೆ ತಳ್ಳುತ್ತದೆ ಎಂಬ ಪರಿಜ್ಞಾನ ಅವರಿಗಿರುವುದಿಲ್ಲ. ಪೋಷಕರ ಸಭೆಗಳಲ್ಲಿ ಅನೇಕ ಬಾರಿ ಇಂತಹ ಪೋಷಕರನ್ನು ಭೇಟಿ ಮಾಡುತ್ತೇವೆ. ಕೆಲ ಪೋಷಕರು ಮಕ್ಕಳ ಅಂಕಗಳನ್ನು ನೋಡಿ ಆಕಾಶವೇ ಮೇಲೆ ಬಿದ್ದಂತೆ ಆಡುತ್ತಾರೆ. ಪೋಷಕರ ಸಭೆಗಳಲ್ಲಿ […]
↧