ಕಾಬೂಲ್: ಆಫ್ಘಾನಿಸ್ತಾನ ಜೊತೆಗಿನ ಸ್ನೇಹ ಮತ್ತು ಸಮರಗಳಿಂದ ತತ್ತರಿಸಿದ್ದ ಆಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ಸಹಕಾರದ ಸಂಕೇತವಾಗಿ ಭಾರತವೇ ನಿರ್ಮಿಸಿಕೊಟ್ಟ ಆಫ್ಘಾನಿಸ್ತಾನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿ ಉದ್ಘಾಟಿಸಿದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಆಫ್ಘಾನಿಸ್ತಾನಕ್ಕೆ ಚೊಚ್ಚಲ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಫ್ಘಾನ್ ಭೇಟಿಯನ್ನು ಭದ್ರತಾ ಕಾರಣಗಳಿಗಾಗಿ ರಹಸ್ಯವಾಗಿ ಇಡಲಾಗಿತ್ತು. ಸಮರಗಳಿಂದ ತತ್ತರಿಸಿದ್ದ ಆಫ್ಘಾನಿಸ್ತಾನದ ಮರುನಿರ್ಮಾಣ ಮತ್ತು ಅಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ ಭಾರತ 200 ಕೋಟಿ ಡಾಲರ್ಗಳನ್ನು ವೆಚ್ಚ ಮಾಡಿದೆ. […]
↧