ಲಂಡನ್: ಭಾರತೀಯ ಮೂಲದ ಕ್ಯಾನ್ಸರ್ ಸಂಶೋಧನೆ ತಜ್ಞ ಹರ್ಪಾಲ್ ಸಿಂಗ್ ಕುಮಾರ್ ಅವರಿಗೆ ಇಂಗ್ಲೆಂಡಿನ ಎರಡನೇ ಎಲಿಜಬೆತ್ ರಾಣಿ ಅವರು ಪ್ರತಿಷ್ಠಿತ ನೈಟ್ಹುಡ್ ಪದವಿ ನೀಡಿ ಗೌರವಿಸಿದ್ದಾರೆ. ಕ್ಯಾನ್ಸರ್ ರೋಗವನ್ನು ತಡೆಗಟ್ಟುವಿಕೆ, ಪ್ರಾರಂಭದ ಹಂತದಲ್ಲಿಯೇ ಪತ್ತೆಹಚ್ಚುವಿಕೆ ಮತ್ತು ಅದಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುವಲ್ಲಿ ನಡೆಸಿರುವ ಪರಿಣಾಮಕಾರಿ ಸಂಶೋಧನೆಯನ್ನು ಪರಿಗಣಿಸಿ ಹರ್ಪಾಲ್ ಸಿಂಗ್ ಕುಮಾರ್ ಅವರಿಗೆ ಈ ಪದವಿಯನ್ನು ನೀಡಿ ಗೌರವಿಸಲಾಗಿದೆ. ಇಂಗ್ಲೆಂಡಿನ ಕ್ಯಾನ್ಸರ್ ಸಂಶೋಧನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಪಾಲ್ ಸಿಂಗ್. ಮಾತ್ರವಲ್ಲದೆ ಸ್ವತಂತ್ರ ಕ್ಯಾನ್ಸರ್ ಕಾರ್ಯಪಡೆಯ ಅಧ್ಯಕ್ಷರೂ […]
↧