ಬೀಜಿಂಗ್ (ಎಎಫ್‌ಪಿ): ಅಣ್ವಸ್ತ್ರ ಸಜ್ಜಿತ ರಾಷ್ಟ್ರ ಉತ್ತರ ಕೊರಿಯಾ ‘ಜಗತ್ತಿಗೆ ಎದುರಾಗಿರುವ ಪ್ರತ್ಯಕ್ಷ್ಯ, ಘೋಷಿತ ಬೆದರಿಕೆ’ಯಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು ತಿಳಿಸಿದ್ದಾರೆ. ಉತ್ತರ ಕೊರಿಯಾ ನಡೆಸಿದ ನಾಲ್ಕನೇ ಅಣ್ವಸ್ತ್ರ ಪರೀಕ್ಷೆಯ ಕುರಿತು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ ಚರ್ಚಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಸ್ವದೇಶ ಹಾಗೂ ಸ್ನೇಹಿತರನ್ನು ಮತ್ತು ಮೈತ್ರಿ ರಾಷ್ಟ್ರಗಳ ರಕ್ಷಣೆಗಾಗಿ ಅಮೆರಿಕವು ಅಗತ್ಯ ಇರುವ ಎಲ್ಲವನ್ನೂ ಅಮೆರಿಕ ಮಾಡಲಿದೆ’ ಎಂದು ವಾಂಗ್ ಜತೆಗಿನ ಜಂಟಿ […]
↧