ಲಂಡನ್: ಇಟಲಿಯ ಒಸ್ಟಾನಾ ನಗರಕ್ಕೀಗ ಹಬ್ಬವೋ ಹಬ್ಬ. ಏಕೆಂದರೆ ಆ ನಗರದಲ್ಲಿ ಬರೋಬ್ಬರಿ 28 ವರ್ಷಗಳ ಬಳಿಕ ಮಗು ಜನಿಸಿದೆ. ಹೀಗಾಗಿ ಅಲ್ಲಿ ಸಂಭ್ರಮಕ್ಕೆ ಎಣೆಯೇ ಅಲ್ಲ. ಆ ಮಗುವಿನ ಹೆಸರು ಪಬ್ಲೋ. ಈ ಊರಲ್ಲಿ ಕೊನೇ ಮಗು ಹುಟ್ಟಿದ್ದು 1987ರಲ್ಲಿ. ಇಲ್ಲಿ ಒಂದು ಕಾಲಕ್ಕೆ ಸಾವಿರ ಮಂದಿ ಇದ್ದರು. ಆದರೆ ಉದ್ಯೋಗ ಅರಸಿಕೊಂಡು ಸ್ಥಳೀಯರು ನಗರ ತೊರೆಯಲಾರಂಭಿಸಿದ್ದರು. ಹೀಗಾಗಿ ಅಲ್ಲಿನ ಜನಸಂಖ್ಯೆ ಗಣನೀಯವಾಗಿ ಕುಸಿಯಿತು. ಪೆಬ್ಲೋ ಹುಟ್ಟಿದ್ರಿಂದಾಗಿ ಅಲ್ಲಿನ ಜನಸಂಖ್ಯೆ 85ಕ್ಕೆ ಏರಿದೆ.
↧