ಮಾಸ್ಕೊ (ಎಎಫ್‌ಪಿ): ರಷ್ಯಾದ ಕೈಗಾರಿಕೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 11 ಜನರು ಸಜೀವ ದಹನಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಮಾಸ್ಕೋದ ಪೂರ್ವ ಭಾಗದಲ್ಲಿರುವ ಕೈಗಾರಿಕೆಯಲ್ಲಿ ಈ ಅವಘಡ ಸಂಭವಿಸಿದೆ. ಮೂರು ಸಾವಿರ ಚದರ ಅಡಿ ವಿಸ್ತಾರ ಕೈಗಾರಿಕೆಯಲ್ಲಿ ಬೆಂಕಿ ವ್ಯಾಪಿಸಿಕೊಂಡು, ಮಾಳಿಗೆ ಸಹಿತ ಸುಟ್ಟು ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಬೆಂಕಿಯನ್ನು ನಂದಿಸಲಾಗಿದ್ದು, ಈವರೆಗೂ 11 ಶವಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸ್ಥಳೀಯ ತನಿಖಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಶನಿವಾರ ತಡರಾತ್ರಿ […]
↧