ಇಸ್ಲಾಮಾಬಾದ್ (ಪಿಟಿಐ): 2014ರ ಪೆಶಾವರ ಸೇನಾಶಾಲೆ ಮೇಲಿನ ಉಗ್ರರ ಭೀಕರ ದಾಳಿ ಘಟನೆ ನಂತರ ಪಾಕಿಸ್ತಾನವು ಈವರೆಗೂ 182 ಮದರಸಾಗಳಿಗೆ ಬೀಗಮುದ್ರೆ ಹಾಕಿದೆ. ತೀವ್ರವಾದ ಉತ್ತೇಜಿಸುವ ಹಾಗೂ ಇತರ ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ ಪಂಜಾಬ್, ಸಿಂಧ್ ಹಾಗೂ ಖೈಬರ್ ಫಖ್ತುಂಖ್ವಾದಲ್ಲಿನ ಮದರಸಾಗಳನ್ನು ಮುಚ್ಚಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ ಸುದ್ದಿಸಂಸ್ಥೆ ವರದಿ ಮಾಡಿದೆ. ಪೆಶಾವರ ಸೇನಾ ಶಾಲೆ ಮೇಲಿನ ಉಗ್ರರ ದಾಳಿ ಘಟನೆಯ ಬಳಿಕ ಅಸ್ತಿತ್ವಕ್ಕೆ ಬಂದಿರುವ ಭಯೋತ್ಪಾದನೆ ವಿರುದ್ಧದ ರಾಷ್ಟ್ರೀಯ ಕಾರ್ಯ ಯೋಜನೆ(ಎನ್‌ಎಪಿ) ಅಡಿಯಲ್ಲಿ […]
↧