ಲಂಡನ್ (ಪಿಟಿಐ): ಎರಡನೇ ಪೋಪ್ ಜಾನ್ ಪಾಲ್ ಅವರು ವಿವಾಹಿತ ಪೋಲೆಂಡ್ ಮೂಲದ ಅಮೆರಿಕ ತತ್ವಜ್ಞಾನಿಯೊಂದಿಗೆ 30ಕ್ಕೂ ಹೆಚ್ಚು ವರ್ಷಗಳಿಂದ ಗಾಢ ಸಂಬಂಧ ಹೊಂದಿದ್ದರು ಎಂದು ಬಿಬಿಸಿ ಹೇಳಿದೆ. ವಾಟಿಕನ್ನ ಮಾಜಿ ಧರ್ಮಗುರು ದಿವಂಗತ ಜಾನ್ ಪಾಲ್ ಅವರು ಅನ್ನಾ ತೆರೆಸಾ ಟೈಮೀನೈಇಕಾ ಅವರಿಗೆ ಬರೆದ ಪತ್ರಗಳನ್ನು ಬಿಬಿಸಿಯಲ್ಲಿ ಸೋಮವಾರ ಪ್ರಸಾರವಾದ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದ್ದು, ಪಾಲ್ ಅವರ ಇನ್ನೊಂದು ಬದುಕು ಅನಾವರಣಗೊಂಡಿದೆ. 2005ರಲ್ಲಿ ನಿಧನರಾದ ಜಾನ್ ಪಾಲ್ ಅವರ ಬ್ರಹ್ಮಚರ್ಯೆಕ್ಕೆ ತೊಂದರೆ ಆಗುವ ಯಾವುದೇ ಸೂಚನೆಗಳು ಪತ್ರದಲ್ಲಿಲ್ಲ, […]
↧