ಮೆಲ್ಬೋರ್ನ್, ಫೆ.೨೨-ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಭಾರತ ಮೂಲದ ಮಹಿಳಾ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರನ್ನು ನಿಗೂಢ ರೀತಿಯಲ್ಲಿ ಹತ್ಯೆ ಮಾಡಿದ್ದರ ಹಿಂದಿನ ರಹಸ್ಯವನ್ನು ಭೇದಿಸಿರುವ ಪೊಲೀಸರು ಭಾರತದಲ್ಲೇ ಇರುವ ವ್ಯಕ್ತಿಯೊಬ್ಬರು ಇದರ ಹಿಂದಿದ್ದಾರೆ ಎಂದು ತಿಳಿಸಿದ್ದಾರೆ. ಬೆಂಗಳೂರಿನ ಮೈಂಡ್ ಟ್ರೀ ಕಂಪೆನಿಯಿಂದ ಮೂರು ವರ್ಷಗಳ ಡೆಪ್ಯೂಟೇಷನ್ ಮೇಲೆ ಇಲ್ಲಿಗೆ ಬಂದಿದ್ದ ೪೧ ವರ್ಷದ ಪ್ರತಿಭಾ ಅರುಣ್‌ಕುಮಾರ್ ಅವರು ಮಾರ್ಚ್‌ನಲ್ಲಿ ಸಿಡ್ನಿಯಲ್ಲಿನ ಕಚೇರಿಯಿಂದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ದಾಳಿ ಮಾಡಿ ಹತ್ಯೆ ಮಾಡಿದ್ದ. ಅತ್ಯಂತ ನಿಗೂಢವಾಗಿದ್ದ ಈ […]
↧