ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ಅಪೂರ್ವವಾದ ಘಟ್ಟವಾಗಿದ್ದು ಪ್ರತಿಯೊಬ್ಬ ಹೆಣ್ಣು ಕೂಡ ಈ ಕ್ಷಣಕ್ಕಾಗಿ ಕಾಯುತ್ತಿರುತ್ತಾಳೆ. ನವ ಮಾಸ ತನ್ನ ಉದರದಲ್ಲಿ ತನ್ನದೇ ರಕ್ತ ಮಾಂಸ ಹಂಚಿಕೊಂಡು ಬೆಳೆಯುವ ಪುಟ್ಟ ಕಾಲುಗಳನ್ನು ನೋಡಲು ಆಕೆ ತವಕಿಸುತ್ತಿರುತ್ತಾಳೆ. ಗರ್ಭಿಣಿಯು ಈ ಸಮಯದಲ್ಲಿ ಹೆಚ್ಚಿನ ನಾಜೂಕಿನ ದೇಹವನ್ನು ಪಡೆದುಕೊಂಡಿರುವುರಿಂದ ಮತ್ತು ದೈಹಿಕ ಬದಲಾವಣೆಗಳಿಗೆ ಆಕೆ ಒಗ್ಗಿಕೊಳ್ಳಬೇಕಾಗಿರುವುದರಿಂದ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ತಾನು ಧರಿಸುವ ದಿರಿಸು, ಕುಳಿತುಕೊಳ್ಳುವ ನಿಲ್ಲುವ ಭಂಗಿ, ಕೆಲಸ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ನಡೆದಾಡುವಾಗ ಅನುಸರಿಸಬೇಕಾದ ನಿಯಮಗಳು ಹೀಗೆ […]
↧