ಸಿಯೋಲ್, ಮಾ.4- ಅಂತಾರಾಷ್ಟ್ರೀಯ ಸಮುದಾಯದ ವಿರೋಧ, ನಿರ್ಬಂಧಗಳ ನಡುವೆಯೂ ತನ್ನದೇ ಹಾದಿಯಲ್ಲಿ ಸಾಗುತ್ತಿರುವ ಉತ್ತರ ಕೊರಿಯ ಅಧ್ಯಕ್ಷ ಕಿಮ್‌ಜೊಂಗ್ ಉನ್, ಯಾವುದೇ ಸಂದರ್ಭ ಅಣ್ವಸ್ತ್ರಗಳನ್ನು ಪ್ರಯೋಗಿಸಲು ಸನ್ನದ್ಧವಾಗಿರುವಂತೆ ಸೂಚನೆ ನೀಡಿದ್ದು, ತಮ್ಮ ಶತ್ರುಗಳಿಂದ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಬಂಧಕ ದಾಳಿಗೂ ಸಿದ್ಧವಿರುವಂತೆ ಆದೇಶಿಸಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಬುಧವಾರ ಮತ್ತೆ ಹೊಸದಾಗಿ ಕೆಲವು ಕಠಿಣತರ ನಿರ್ಬಂಧಗಳನ್ನು ಹೇರಿದ ನಂತರ ಉತ್ತರ ಕೊರಿಯದ ವಿರುದ್ಧ ವಿಶ್ವದಾದ್ಯಂತ ಬೆದರಿಕೆ ಹೆಚ್ಚುತ್ತಿದ್ದು, ದೇಶಾದ್ಯಂತ ಉದ್ವಿಗ್ನತೆ ತಲೆದೋರಿದೆ ಎಂದು ಉತ್ತರ ಕೊರಿಯ […]
↧