ವಾಷಿಂಗ್ಟನ್ (ಪಿಟಿಐ): ಭಾರತಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದ ಅಮೆರಿಕದ ಧಾರ್ಮಿಕ ಆಯೋಗವೊಂದರ ನಿಯೋಗಕ್ಕೆ ಭಾರತ ಸರ್ಕಾರ ವಿಸಾ ನಿರಾಕರಿಸಿದೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆಸಲು ಹಾಗೂ ಆ ಬಗ್ಗೆ ವರದಿ ನೀಡಲು ಒಂದು ವಾರ ಕಾಲ ಭಾರತಕ್ಕೆ ಭೇಟಿ ನೀಡಲು ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಅಂತರರಾಷ್ಟ್ರೀಯ ಆಯೋಗ (ಯುಎಸ್‌ಸಿಐಆರ್‌ಎಫ್) ಮುಂದಾಗಿತ್ತು. ಆಯೋಗದ ಮೂರು ಮಂದಿ ಸದಸ್ಯರ ನಿಯೋಗ ಶುಕ್ರವಾರದಿಂದ (ಮಾ.4) ಒಂದು ವಾರ ಕಾಲ ಭಾರತ ಪ್ರವಾಸಕ್ಕೆ ಉದ್ದೇಶಿಸಿತ್ತು. ಭಾರತದ ಧಾರ್ಮಿಕ ಮುಖಂಡರು ಹಾಗೂ […]
↧