ವಾಷಿಂಗ್ಟನ್: ಅಮೆರಿಕದ ರಾಜಕೀಯ ವೇದಿಕೆಯಲ್ಲಿ ಹಠಾತ್ತಾಗಿ ಡೋನಾಲ್ಡ್ ಟ್ರಂಪ್ ಮೇಲೇರುತ್ತಿರುವುದು ಅಮೆರಿಕಾಕ್ಕೆ ವಲಸೆ ಹೋಗಿರುವವರನ್ನು ಭೀತಿಗೊಳಪಡಿಸಿದ್ದು `ಹೇಗಾದರೂ ಮಾಡಿ ವಿವಾದಾತ್ಮಕ ವ್ಯಕ್ತಿ ಟ್ರಂಪ್ ಶ್ವೇತ ಭವನ ಪ್ರವೇಶಿಸುವುದನ್ನು ತಡೆಯಬೇಕೆಂದು ನಮ್ಮ ಈಗಿನ ಗುರಿ’ ಎಂದು ಭಾರತ ಸಂಜಾತ ಅಮೆರಿಕದ ವೈದ್ಯ ಹಾಗೂ ಕವಿ ಅಮಿತ್ ಮಜುಂದಾರ್ ಹೇಳಿದ್ದಾರೆ. ಇಬ್ಬರು ಡೆಮೊಕ್ರಾಟಿಕ್ ಅಭ್ಯರ್ಥಿಗಳಾದ ಹಿಲರಿ ಕ್ಲಿಂಟನ್ ಮತ್ತು ಬೆರ್ನಿ ಸ್ಟಾಂಡರ್ಸ್ ಅವರೆದುರಿಗೆ ನಿನ್ನೆ ತಮ್ಮ ಹಾಗೂ ವಲಸೆ ಬಂದಿರುವ ಸಮುದಾಯದ ಆತಂಕಗಳನ್ನು ದುಬ್ಲಿನ್‌ನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಅಮಿತ್ ವ್ಯಕ್ತಪಡಿಸಿದ್ದಾರೆ. […]
↧