ಬೆಲ್ಲ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಬಹುತೇಕ ಮಂದಿ ಸಕ್ಕರೆಯತ್ತ ವಾಲುತ್ತಿರುವುದೇ ಇದಕ್ಕೆ ಕಾರಣ. ಆದರೆ, ಬೆಲ್ಲದಿಂದಾಗುವ ಉಪಯೋಗಗಳ ಬಗ್ಗೆ ಬಲ್ಲವರಿಗೆ ಮಾತ್ರವೇ ತಿಳಿದಿರುತ್ತದೆ. ಉಳಿದವರೂ ತಿಳಿಯಲು ಯತ್ನಿಸಬೇಕು. ಬೆಲ್ಲ ಕೇವಲ ಸಿಹಿ ಪದಾರ್ಥವಾಗಿರದೆ, ಔಷಧಿಯುಕ್ತ ಸಿಹಿಯಾಗಿದೆ. ನೋಡಲಿಕೆ ಕಂದು ಅಥವಾ ಕಪ್ಪಗಿರುವ ಕಾರಣ ಯುವಪೀಳಿಗೆಯವರು ಬೆಲ್ಲ ತಿನ್ನಲು ಹಿಂದೇಟು ಹಾಕುತ್ತಿರಬಹುದು. ಆದರೆ, ಬೆಳ್ಳಗೆ ಕಾಣುವ ಸಕ್ಕರೆಗಿಂತಲೂ ಬೆಲ್ಲ ಅತ್ಯುತ್ತಮ ಎಂಬುದನ್ನು ಮರೆಯಬಾರದು. ಬೆಲ್ಲವನ್ನು ನೀರಿನೊಂದಿಗೆ ಸೇವಿಸುವ ಬದಲಿಗೆ ಹಾಲಿನೊಂದಿಗೆ ಸೇವಿಸಿದರೆ ಉತ್ತಮ ಎಂಬ ಅಂಶವನ್ನು ಆಯುರ್ವೇದ […]
↧