ಮಾರ್ಚ್ ತಿಂಗಳ ಎರಡನೇ ವಾರದಲ್ಲಿದ್ದೇವೆ, ಆಗಲೇ ಬಿಲಿಸಿನ ಝಳ ಜಾಸ್ತಿಯಾಗಿದ್ದು, ಜನರು ಮನೆ, ಕಛೇರಿಗಳಿಂದ ಹೊರ ಬರಲಿಕ್ಕೂ ಹಿಂದೆ ಮುಂದೆ ನೋಡುವಂತಹ ಸ್ಥಿತಿ ಎದುರಾಗಿದೆ. ಬಿಸಿಲಿನ ಧಗೆಯಿಂದ ಪಾರಾಗಲು, ನೀರಿನ ದಾಹ ತೀರಿಸಿಕೊಳ್ಳಲು ಹಲವು ಮಾರ್ಗೋಪಾಯಗಳಿವೆ. ಪ್ರಮುಖವಾಗಿ ನಿಂಬೆ ಶರಬತ್ತು ಬೇಸಿಗೆಯಲ್ಲಿ ಕುಡಿಯಲು ಇದೊಂದು ಉತ್ತಮ ಪಾನೀಯ. ಅದೇ ರೀತಿ ಕಲ್ಲಂಗಡಿ ಹಣ್ಣು, ಕರ್ಬೂಜಾ, ಎಳೆ ಸೌತೆಕಾಯಿಗಳನ್ನು ತಿನ್ನುವುದರಿಂದ ರಣ ಬಿಸಿಲಿನ ದಾಹವನ್ನು ತಣಿಸಿಕೊಳ್ಳಬಹುದಾಗಿದೆ. ಸೌತೆಕಾಯಿಯಲ್ಲಿ ಪುಷ್ಕಳವಾಗಿ ನೀರಿನ ಅಂಶಗಳಿದ್ದು, ಅವುಗಳ ಜತೆಗೆ ಉತ್ತಮ ಪ್ರಮಾಣದಲ್ಲಿ ವಿಟಮಿನ್‌ಗಳು […]
↧