ವಾಷಿಂಗ್ಟನ್: ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿರುವ ಡೋನಾಲ್ಡ್ ಟ್ರಂಪ್, ಇದೀಗ ಭಾರತದ ಯುವಕರನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯರನ್ನು ದೇಶದಿಂದ ಆಚೆ ಕಳಿಸುವುದಿಲ್ಲ. ಇಂತಹ ಚುರುಕು ವ್ಯಕ್ತಿಗಳು ನಮ್ಮ ದೇಶಕ್ಕೆ ಬೇಕು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ನಾವು ಅನೇಕ ಮಂದಿಯನ್ನು ಶಿಕ್ಷಣವಂತರನ್ನಾಗಿ ಮಾಡಿದ್ದೇವೆ. ಅವರ ಚುರುಕುತನಕ್ಕೆೆ ಮೆಚ್ಚಬೇಕು. ಇಂತಹ ಚುರುಕು ವ್ಯಕ್ತಿಗಳ ಅಗತ್ಯತೆ ನಮ್ಮ ದೇಶಕ್ಕಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ. […]
↧