ಕೈಟೋ: ಅಮೆಜಾನ್ ಅಭಯಾರಣ್ಯದಲ್ಲಿ ಈಕ್ವೆಡಾರ್‌ಗೆ ಸೇರಿದ ಸೈನಿಕ ವಿಮಾನವೊಂದು ನೆಲಕ್ಕುರುಳಿದ್ದು, ಅದರಲ್ಲಿದ್ದ ೨೨ ಮಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿ ೧೯ಮಂದಿ ಸೈನಿಕರು, ಇಬ್ಬರು ವೈಮಾನಿಕ ಸಿಬ್ಬಂದಿ, ಒಬ್ಬ ಮೆಕಾನಿಕ್ ಪ್ರಯಾಣಿಸುತ್ತಿದ್ದು, ಪೆರುವಿನ ಗಡಿ ಭಾಗದ ಪಾಸ್ತಜಾ ಪೂರ್ವಭಾಗದಲ್ಲಿ ಅದು ಬಂದಿಳಿಯಬೇಕಿತ್ತು. ಆದರೆ ವಿಮಾನ ಅಮೆಜಾನ್ ನಿತ್ಯ ಹರಿದ್ವರ್ಣ ಕಾಡು ಪ್ರದೇಶದಲ್ಲಿ ಪತನವಾಗಿದ್ದು ಅದರಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು ಈಕ್ವೆಡಾರ್‌ನ ಅಧ್ಯಕ್ಷರು ತಿಳಿಸಿದ್ದಾರೆ.
↧