ಪ್ಯುರ್ಟೋ ರಿಕೋ: 2016ರ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಕರೇಬಿಯನ್ ದ್ವೀಪ ಪ್ಯುರ್ಟೋ ರಿಕೋಸೌಂದರ್ಯ ರಾಣಿಗೆ ನಿರ್ಬಂಧ ಹೇರಲಾಗಿದೆ. ಕ್ರಿಸ್ತಿಲೀ ಕಾರಿಡೆ ಎಂಬ ಮಾಡೆಲ್ ನಾಲ್ಕು ತಿಂಗಳ ಹಿಂದೆ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಪ್ಯುರೆಟೋ ರಿಕೋ ಆಗಿ ಆಯ್ಕೆಯಾಗಿದ್ದು, ಮಿಸ್ ಯುನಿವರ್ಸ್ ಸ್ಪರ್ಧೆಯ ಸ್ಪರ್ಧಾಳು ಆಗಿದ್ದಳು. 2016ರಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಈಕೆ ಭಾಗವಹಿಸಬೇಕಾಗಿತ್ತು. ಆದರೆ ಇತ್ತೀಚಿಗೆ ಮಾಧ್ಯಮವೊಂದು ಸಂದರ್ಶನ ನಡೆಸಲು ಬಂದಾಗ ನನಗೆ ಕ್ಯಾಮೆರಾ ಇಷ್ಟವಿಲ್ಲ ಎಂದು ಹೇಳಿ ಉದ್ದಟತನದಿಂದ ವರ್ತಿಸಿದ್ದಳು. ಕಾರಿಡೆ ಉತ್ತರವನ್ನು […]
↧