ಪ್ರತೀಯೊಬ್ಬರ ಜೀವನದಲ್ಲೂ ನಿರೀಕ್ಷೆ ಹಾಗೂ ಆಸೆ ಎಂಬುದಿರುತ್ತದೆ. ಆದರೆ, ಆ ನಿರೀಕ್ಷೆಗಳು ಅತಿಯಾಗಬಾರದಷ್ಟೇ. ಅತಿ ನಿರೀಕ್ಷೆಗಳು ದುಃಖಕ್ಕೆ ಕಾರಣವಾಗುತ್ತದೆ. ಅಲ್ಲದೆ, ನಮ್ಮನ್ನು ನಾವೇ ನಮ್ಮ ಕೈಯಿಂದ ಹಾಳು ಮಾಡಿಕೊಳ್ಳುತ್ತೇವೆ. ಮದುವೆಯಾದ ಮೇಲೆ ಪ್ರತೀಯೊಬ್ಬ ಹೆಣ್ಣಿಗೂ ನಿರೀಕ್ಷೆಯೆಂಬುದಿರುತ್ತದೆ. ಆ ನಿರೀಕ್ಷೆಗಳನ್ನು ತಮ್ಮ ಪತಿಯೇ ಈಡೇರಿಸಬೇಕೆಂದು ಇಚ್ಛಿಸುತ್ತಾಳೆ. ಆದರೆ, ಇಂತಹ ನಿರೀಕ್ಷೆಗಳು ಅತೀಯಾದರೆ ಗಂಡನ ಜೊತೆ ಘರ್ಷಣೆಯಾಗಿ, ವಿಚ್ಛೇದನಕ್ಕೂ ಕಾರಣವಾಗುತ್ತದೆಂದು ಸಂಶೋಧನೆಯೊಂದು ಹೇಳಿದೆ. ದಂಪತಿಗಳ ದಾಂಪತ್ಯ ಕುರಿತಂತೆ ಫ್ಲೊರಿಡಾ ವಿಶ್ವವಿದ್ಯಾಲಯದ ಸಂಶೋಧನೆಯೊಂದನ್ನು ನಡೆಸಿದ್ದು, ಸಂಶೋಧನೆಯಲ್ಲಿ 135 ನವ ವಿವಾಹಿತ ದಂಪತಿಗಳನ್ನು […]
↧