ಲಂಡನ್: ಬೆಲ್ಜಿಯಂನ ಬ್ರಸೆಲ್ಸ್ನಲ್ಲಿ ಸಂಭವಿಸಿದ ಬಾಂಬ್ ದಾಳಿ ವೇಳೆಯಲ್ಲಿ ಕಣ್ಮರೆಯಾಗಿರುವ ಇನ್ಫೋಸಿಸ್ ಉದ್ಯೋಗಿ ಬೆಂಗಳೂರಿನ ರಾಘವೇಂದ್ರನ್ ಗಣೇಶ್ ಅವರ ಕೊನೆಯ ಕರೆ ಬ್ರಸೆಲ್ಸ್ ಮೆಟ್ರೊದಿಂದ ಬಂದಿತ್ತು ಎಂಬುದು ಬೆಳಕಿಗೆ ಬಂದಿದೆ ಎಂದು ‘ದಿ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ. ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಗಣೇಶ್ ಅವರು ಕರೆ ಮಾಡಿದ್ದರು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ದೃಢ ಪಡಿಸಿದ್ದಾರೆ ಎಂದು ವರದಿ ಹೇಳಿದೆ. ‘ರಾಘವೇಂದ್ರನ್ ಅವರು ಕಳೆದ ತಿಂಗಳು ತಮ್ಮ ಪತ್ನಿಗೆ ಚೆನ್ನೈಯಲ್ಲಿ ಹೆರಿಗೆಯಾದಾಗ […]
↧