ಮಹಿಳೆಯರಿಗೆ ಗರ್ಭ ನಿರೋಧಕ ಔಷಧಿಗಳಿವೆ. ಆದರೆ ಪುರುಷರಿಗೆ ಯಾಕಿಲ್ಲ? ಎಂದು ಕೇಳುವವರು ಈ ಸುದ್ದಿಯನ್ನೊಮ್ಮೆ ಓದಿ. ಪುರುಷರಿಗೂ ಗರ್ಭ ನಿರೋಧಕ ಔಷಧಿಗಳು ತಯಾರಾಗುತ್ತಿದ್ದು 2018ರ ವೇಳೆಗೆ ಈ ಔಷಧಿಗಳು ಮಾರುಕಟ್ಟೆಗೆ ಬರಲಿವೆ. ಅಂದ ಹಾಗೆ ಸೀಟೆಲ್ನ ವಾಷಿಂಗ್ಟನ್ ಯುನಿವರ್ಸಿಟಿಯಲ್ಲಿ ಈ ಔಷಧಿ ಬಗ್ಗೆ ಪ್ರಯೋಗಗಳು ನಡೆದು ಬರುತ್ತಿವೆ. ಇಲ್ಲಿಯವರೆಗೆ ಪುರುಷರ ಗರ್ಭ ನಿರೋಧಕ್ಕಾಗಿ ಕಾಂಡೋಮ್ ಬಳಕೆ , ವಾಸಕ್ಟಮಿ ಮಾಡಲಾಗುತ್ತಿತ್ತು. ಆದರೆ 2018ರ ವೇಳೆಗೆ ಪುರುಷರಿಗಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ತಯಾರಿಸಲಾಗುವುದು ಎಂದು ತಜ್ಞರು ಹೇಳಿದ್ದಾರೆ. ಪುರುಷರಿಗಾಗಿ […]
↧