ಟೋಕಿಯೋ: ಜಪಾನ್ ನಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.3ರಷ್ಟು ದಾಖಲಾಗಿರುವುದಾಗಿ ಶನಿವಾರ ತಿಳಿದುಬಂದಿದೆ. ಈಗಾಗಲೇ ಸುಮಾರು 22ಕ್ಕೂ ಹೆಚ್ಚು ಭಾರಿ ಭೂಮಿ ಕಂಪಸಿದ್ದು, ಜಪಾನ್ ಸಾಕಷ್ಟು ಹಾನಿಗೊಳಗಾಗಿರುವುದಾಗಿ ತಿಳಿದುಬಂದಿದೆ. ಇಂದು ಬೆಳಿಗ್ಗೆ 1.25ರ ಸುಮಾರಿಗೆ ಭೂಕಂಪವಾಗಿದ್ದು, ಭೂಕಂಪದ ಪರಿಣಾಮ 11ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ. ಇನ್ನು ಭೂಕಂಪದ ಪರಿಣಾಮ ಅನೇಕ ಕಡೆ ಮನೆಗಳು ಹಾಗೂ ಕಟ್ಟಡಗಳು ಕುಸಿದು ಬಿದ್ದಿವೆ. ಇದಲ್ಲದೆ ಹಲವೆಡೆ […]
↧