ಜಗತ್ತಿನಾದ್ಯಂತ ರಸ್ತೆ ಮೇಲೆ ಸಾವಿರಾರು ಕಾರುಗಳು, ಲಾರಿಗಳು, ಬಸ್ಸುಗಳು, ಆಗಸದಲ್ಲಿ ವಿಮಾನ ಇತರ ವಾಹನಗಳು ಸಂಚರಿಸುತ್ತಿವೆ ಆದರೆ ಏಕಾಏಕಿ ಇವೆಲ್ಲ ಸ್ಥಗಿತಗೊಂಡರೆ ಏನಾಗಬಹುದು? ಇಡೀ ಜಗತ್ತಿನ ಜನಜೀವನವೇ ಸ್ತಬ್ಧವಾಗಬಹುದು. ಅಷ್ಟರಮಟ್ಟಿಗೆ ನಾವು ಪಳೆಯುಳಿಕೆಯ ಇಂಧನಗಳನ್ನು ಅರ್ಥಾತ್ ಪೆಟ್ರೋಲಿಯಂ ಉತ್ಪನ್ನ, ಕಲ್ಲಿದ್ದಲು ಇತ್ಯಾದಿಗಳನ್ನು ಅವಲಂಬಿಸಿದ್ದೇವೆ. ಆದರೆ ಇವುಗಳ ಬಳಕೆ ಪ್ರಮಾಣ ವಿಪರೀತ ಹೆಚ್ಚುತ್ತಿದ್ದು ಇನ್ನು ಕೇವಲ ಹತ್ತೇ ವರ್ಷಕ್ಕೆ ಖಾಲಿಯಾಗಲಿದೆ ಎಂದು ಸಂಶೋಧಕರ ತಂಡವೊಂದು ಎಚ್ಚರಿಸಿದೆ. ಸಸ್ಸೆಕ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವೊಂದು ಈ ಎಚ್ಚರಿಕೆ ರವಾನಿಸಿದೆ. ಪರ್ಯಾಯ ಇಂಧನದ […]
↧