ವಾಶಿಂಗ್ಟನ್: ಅಂತರಾಷ್ಟ್ರೀಯ ಕಣ್ಗಾವಲು ಸಂಸ್ಥೆಯೊಂದು ಇತ್ತೀಚಿಗೆ ಬಿಡುಗಡೆ ಮಾಡಿರುವ ಮಾಧ್ಯಮ ಅಭಿವ್ಯಕ್ತಿ ಸ್ವಾತಂತ್ರ್ಯ ೧೮೦ ದೇಶಗಳ ಪಟ್ಟಿಯಲ್ಲಿ ೧೩೩ನೇ ಸ್ಥಾನ ಪಡೆದಿರುವ ಭಾರತ ಪಾತಾಳದಲ್ಲಿದ್ದು, ಮಾಧ್ಯಮಗಳ ವಿರುದ್ಧ ಇರುವ ಬೆದರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅನಾಸಕ್ತಿ ತಳೆದಿದ್ದಾರೆ ಎಂದು ದೂರಿದ್ದಾರೆ. ಪ್ಯಾರಿಸ್ ಮೂಲದ ‘ರಿಪೋರ್ಟರ್ ವಿತೌಟ್ ಬಾರ್ಡರ್ಸ್’ (ಗಡಿಯಿಲ್ಲದ ವರದಿಗಾರರು) ನೀಡಿರುವ ಈ ವರದಿಯಲ್ಲಿ, ವಿಶ್ವದಲ್ಲಿ ಮಾಧ್ಯಮದ ಸ್ವಾತಂತ್ರ ಕಳವಳಕಾರಿಯಾಗಿ ಪಾತಾಳ ಹಿಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದು, “ಸರ್ಕಾರಗಳು, ಸಿದ್ಧಾಂತಗಳು ಮತ್ತು ಖಾಸಗಿ ಒಡೆತನದ ಸಂಸ್ಥೆಗಳ” ಒತ್ತಡದಿಂದ ಹೀಗಾಗಿದೆ […]
↧