ಬೀಜಿಂಗ್: ಪೂರ್ವ ಚೀನಾ ಸಮುದ್ರದಲ್ಲಿ ಸರಕು ಸಾಗಣೆ ಹಡಗು ಮತ್ತು ಚೀನೀ ಮೀನುಗಾರರ ದೋಣಿ ಡಿಕ್ಕಿ ಹೊಡೆದ ಪರಿಣಾಮವಾಗಿ 17 ಜನರು ಕಾಣೆಯಾದ ಘಟನೆ ಘಟಿಸಿದೆ. ಮೂಲಗಳ ಪ್ರಕಾರ 19 ಮೀನುಗಾರರನ್ನು ಒಳಗೊಂಡಿದ್ದ ದೋಣಿ ಶನಿವಾರ ಸ್ಥಳೀಯ ಕಾಲಮಾನ ನಸುಕಿನ 3.44ರ ವೇಳೆಗೆ ಸರಕು ಸಾಗಣೆ ಮಾಡುವ ಹಡಗಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಪಾರಾಗಿದ್ದು ಉಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ.
↧