ನವದೆಹಲಿ: ಲಕ್ಷಾಂತರ ಕಿ.ಮೀ ದೂರದಲ್ಲಿರುವ ಆಕಾಶಕಾಯಗಳು ಆಗಾಗ ಭೂಮಿಯ ಸಮೀಪದಲ್ಲಿ ಹಾದುಹೋಗುವ ಮೂಲಕ ನಮ್ಮಲ್ಲಿ ರೋಮಾಂಚನವನ್ನುಂಟು ಮಾಡುತ್ತವೆ. ಆಕಾಶಕಾಯಗಳನ್ನು ನೋಡುವ ಇಂತಹುದೇ ಮತ್ತೊಂದು ಸುವರ್ಣಾವಕಾಶ ಒದಗಿಬಂದಿದ್ದು, ಸೋಮವಾರ ಬುಧ ಗ್ರಹ ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ. ಸೂರ್ಯನ ಸುತ್ತ ಹಾದುಹೋಗುವ ಬುಧ ಗ್ರಹವನ್ನು ವೀಕ್ಷಿಸುವ ಅದೃಷ್ಟ ಈ ಬಾರಿ ಭಾರತೀಯರಿಗೆ ಒಲಿದಿದ್ದು, ಇದೇ ಮೇ 9ರಂದು ಅಂದರೆ ನಾಳೆ ಸೋಮವಾರ ಸರಿಯಾಗಿ ಸಂಜೆ 4.41ರಿಂದ ಬುಧ ಗ್ರಹವನ್ನು ಭೂಮಿಯಿಂದಲೇ ಕಣ್ತುಂಬಿಕೊಳ್ಳಬಹುದು. 7 ಗಂಟೆ ಮತ್ತು 30 ನಿಮಿಷದ ಕಾಲಾವಧಿಯಲ್ಲಿ […]
↧