ವಾಷಿಂಗ್ಟನ್ (ಪಿಟಿಐ): ಮುಸ್ಲಿಮರಿಗೆ ತಾತ್ಕಾಲಿಕವಾಗಿ ಅಮೆರಿಕ ಪ್ರವೇಶವನ್ನು ನಿಷೇಧಿಸಬೇಕು ಎಂದು ಹೇಳಿ ಜಾಗತಿಕ ಟೀಕೆ ಎದುರಿಸಿದ್ದ ರಿಪಬ್ಲಿಕನ್ ಪಕ್ಷದ ಅಮೆರಿಕ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್, ಇದೀಗ ತಮ್ಮ ನಿಲುವಿನಲ್ಲಿ ಮೃಧು ಧೋರಣೆ ತಳೆದಿದ್ದಾರೆ. ‘ಭಯೋತ್ಪಾದನೆ ಗಂಭೀರ ಸಮಸ್ಯೆ. ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವ ತನಕ ಮುಸ್ಲಿಮರ ಪ್ರವೇಶ ತಾತ್ಕಾಲಿಕ ನಿಷೇಧಿಸಬೇಕು ಎಂಬುದೊಂದು ಸಲಹೆಯಷ್ಟೆ. ಅದೇನೂ ಅನುಷ್ಠಾನಗೊಂಡಿಲ್ಲ’ ಎಂದು ಫಾಕ್ಸ್ ರೇಡಿಯೊಗೆ ಅವರು ತಿಳಿಸಿದ್ದಾರೆ. ‘ಜಗತ್ತಿನಾದ್ಯಂತ ತೀವ್ರಗಾಮಿ ಇಸ್ಲಾಮಿಕ್ ಭಯೋತ್ಪಾದನೆ ನಡೆಯುತ್ತಿದೆ. ಪ್ಯಾರಿಸ್, ಸ್ಯಾನ್‌ಬೆರ್ನಾರ್ಡಿನೊ ಹೀಗೆ […]
↧