ವಾಷಿಂಗ್ಟನ್ (ಪಿಟಿಐ): ಚೀನಾ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದು, ಭಾರತದ ಗಡಿಯುದ್ಧಕ್ಕೂ ಹೆಚ್ಚಿನ ಪಡೆಗಳನ್ನು ನಿಯೋಜಿಸಿದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಪೆಂಟಗಾನ್ ಹೇಳಿದೆ. ‘ಚೀನಾ ಸೇನೆಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ಮತ್ತು ಭಾರತದ ಗಡಿಯುದ್ದಕ್ಕೂ ಅಧಿಕ ಪಡೆಗಳನ್ನು ನಿಯೋಜನೆ ಮಾಡಿರುವುದುನ್ನು ನಾವು ಗಮನಿಸಿದ್ದೇವೆ’ ಎಂದು ಪೂರ್ವ ಏಷ್ಯಾ ವಲಯದ ಉಪ ಸಹಾಯಕ ರಕ್ಷಣಾ ಕಾರ್ಯದರ್ಶಿ ಅಬ್ರಹಾಂ ಎಂ. ಡೆನ್ಮಾರ್ಕ್ ತಿಳಿಸಿದ್ದಾರೆ. ಅಮೆರಿಕದ ಸಂಸತ್ತಿಗೆ ‘ಚೀನಾ ಸೇನೆ ಹಾಗೂ ಭದ್ರತಾ ಬೆಳವಣಿಗೆಗಳು’ ಕುರಿತ ವರದಿ ಸಲ್ಲಿಕೆ ಬಳಿಕ ಪ್ರತಿಕಾಗೋಷ್ಠಿಯಲ್ಲಿ […]
↧