ಕೈರೊ(ಪಿಟಿಐ): 26 ವಿದೇಶಿಯರು ಸೇರಿದಂತೆ 66 ಪ್ರಯಾಣಿಕರಿದ್ದ ಈಜಿಪ್ಟ್‌ಏರ್ ವಿಮಾನ ಪ್ಯಾರಿಸ್‌ನಿಂದ ಕೈರೊಗೆ ಬರುತ್ತಿದ್ದ ವೇಳೆ ಮೆಡಿಟರೇನಿಯನ್ ಸಮುದ್ರದಲ್ಲಿ ಗುರುವಾರ ಪತನವಾಗಿದೆ. ವಿಮಾನ ತಾಂತ್ರಿಕ ದೋಷ ಅಥವಾ ಉಗ್ರರ ದಾಳಿಯಿಂದ ಪತನವಾಗಿರಬಹುದು. ಈಗಲೆ ಯಾವುದನ್ನೂ ಖಚಿತವಾಗಿ ಹೇಳಲಾಗದು ಎಂದು ಈಜಿಪ್ಟ್ ಪ್ರಧಾನಿ ಷರೀಫ್ ಇಸ್ಮಾಯಿಲ್ ಹೇಳಿದ್ದಾರೆ. ಪ್ಯಾರಿಸ್‌ನಿಂದ ಬುಧವಾರ ಪ್ರಯಾಣ ಬೆಳೆಸಿದ್ದ ಈಜಿಪ್ಟ್‌ಏರ್ ವಿಮಾನ804 ಈಜಿಪ್ಟ್‌ನ ವೈಮಾನಿಕ ವಲಯವನ್ನು ಸ್ಥಳೀಯ ಕಾಲಮಾನ ಬೆಳಿಗ್ಗೆ 2.45ಕ್ಕೆ ಪ್ರವೇಶಿಸಿದ ಬಳಿಕ ನಿಯಂತ್ರಣ ಕೇಂದ್ರದ ರೆಡಾರ್‌ನಿಂದ ಸಂಪರ್ಕ ಕಳೆದುಕೊಂಡಿದೆ. ವಿಮಾನ ಪತನವಾಗಿದ್ದು, […]
↧