ಹಿರೋಷಿಮಾ (ಜಪಾನ್): ದ್ವಿತೀಯ ಮಹಾ ಸಮರದ ಕಾಲದಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡ ವಿಶ್ವದ ಪ್ರಪ್ರಥಮ ಪರಮಾಣು ಬಾಂಬ್ ನ್ನು ಎಸೆಯಲಾಗಿದ್ದ ಜಪಾನಿನ ಹಿರೋಷಿಮಾ ನಗರಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭೇಟಿ ನೀಡಿ ಇತಿಹಾಸ ಸೃಷ್ಟಿಸಿದ್ದಾರೆ. ಹಿರೋಷಿಮಾ ನಗರಕ್ಕೆ ಭೇಟಿ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡಿ, ‘71 ವರ್ಷಗಳ ಹಿಂದೆ ಮೋಡರಹಿತವಾದ ನಿರ್ಮಲವಾದ ಬೆಳಗಿನಲ್ಲಿ ಆಕಾಶದಿಂದ ಮೃತ್ಯು ಬಂದು ಬಿತ್ತು, ಜೊತೆಗೆ ವಿಶ್ವವೇ ಬದಲಾಗಿಹೋಯಿತು. ದಿಢೀರನೆ […]
↧